ಮಾರ್ಗಶಿರ ಶುಕ್ಲ ಏಕಾದಶೀ!… ಉಭಯಸೇನೆಗಳೂ ಯುದ್ಧ ಸಂನ್ನದ್ಧವಾಗಿ ಪರಸ್ಪರ ಎದುರುಬದುರು ನಿಂತಿವೆ! ಇನ್ನೂ ನಿಶಾನೆಗಳನ್ನು ಬೀಸಿಲ್ಲ! ಭೇರಿವಾದ್ಯಾದಿಗಳಿನ್ನೂ ಮೊಳಗಿಲ್ಲ!
ಕೌರವ ಸೈನ್ಯದಲ್ಲಿ ದುರ್ಯೋಧನ ತನ್ನ ರಥದಿಂದಿಳಿದು ದ್ರೋಣರ ರಥದ ಬಳಿ ಹೋದ! ʼಏನು ತುರ್ತು ಸಮಾಲೋಚನೆಯೋ!ʼ ಎಂದು ಎಲ್ಲರೂ ಅತ್ತಲೇ ನೋಡುತ್ತಿದ್ದಾರೆ!…
ದುರ್ಯೋಧನ್ನ ಮನಸ್ಸು ಆ ಮೊದಲ ರಾತ್ರಿಯಿಂದಲೇ ಸಮಸ್ಥಿತಿಯಲ್ಲಿರಲಿಲ್ಲ! ತನ್ನ ಕಡೆ ಇರುವ, ತಾನು ನಂಬಿದ ಎಲ್ಲರೂ ಪರಮ ದ್ರೋಹಿಗಳೆಂದೂ, ಕೇವಲ ನಿರ್ಬಂಧಿತರಾಗಿ, ಇಕ್ಕಟ್ಟಿನಲ್ಲಿ ಸಿಕ್ಕಿ ತನ್ನ ಕಡೆ ನಿಂತ ಅವರು ಮನಬಿಟ್ಟು ತನಗೆ ಜಯತರಲು ಯತ್ನಿಸಲಾರರೆಂದೂ ಅವನಿಗೀಗ ದೃಢವಾಗಿತ್ತು!… ಗೂಢಚಾರನ ವಾರ್ತೆ ಅದನ್ನು ದೃಢಪಡಿಸಿತ್ತು. ಇದರಲ್ಲಿ ಅವನಿಗೆ ತಿಳಿಯದ ಹೊಸ ವಿಷಯ ಯಾವುದೂ ಇಲ್ಲದಿದ್ದರೂ, ಈ ಯುದ್ಧ ನಿರ್ಣಾಯಕ ಘಟ್ಟದಲ್ಲಿ ಇದು ಅವನ ಎದೆ ಒಡೆಸಿತ್ತು!
ಅಯ್ಯೋ, ಸಂಜಯ! ಕೊನೆಗೂ ಪಾಂಡವರೂ ನನ್ನವರೂ ಯುದ್ಧ ಮಾಡಲೆಂದೇ ಕುರುಕ್ಷೇತ್ರದಲ್ಲಿ, ಆ ಧರ್ಮಕ್ಷೇದಲ್ಲಿ ಸೇರಿದರೆಂದೆಯಲ್ಲ; ಏನು ಮಾಡಿದರು?”: ಎಂದು ಇತ್ತ ಕುರುಡ ದೊರೆ ಸಂಜಯನನ್ನು ವಿಚಿತ್ರ ಪ್ರಶ್ನೆ ಕೇಳಿ ಪೀಡಿಸುತ್ತಿದ್ದಾನೆ!
ಈ ಪ್ರಶ್ನೆಯನ್ನು ಅವನು ಈಗೇನೂ ಹೊಸದಾಗಿ ಕೇಳುತ್ತಿಲ್ಲ! ಹಿಂದೆಯೂ ಎರಡು ಸಲವಾದರೂ ಕೇಳಿ ಹಲುಬಿದ್ದಾನೆ. http://bagavadgita.com
read more:http://ಮೊದಲ ದಿನ ದುರ್ಯೋಧನನ ದುಗುಡಧ! ಅರ್ಜುನನ ವಿಷಾದ!
| apply link |